ಅಥ ವ್ಯವಸ್ಥಿತಾನ್ ದೃಷ್ಟ್ವಾ ದಾರ್ತರಾಷ್ಟ್ರಾನ್ ಕಪಿಧ್ವಜಃ |
ಪ್ರವೃತ್ತೇ ಶಸ್ತ್ರಸಂಪಾತೇ ಧನುರುದ್ಯಮ್ಯ ಪಾಂಡವಃ |
ಹೃಷೀಕೇಶಂ ತದಾ ವಾಕ್ಯಮಿದಮಾಹ ಮಹೀಪತೇ ||೨೦||



ಅನುವಾದ:

ಹೇ ಅರಸನೇ, ಆಗ ಕಪಿಧ್ವಜನಾದ ಅರ್ಜುನನು ಯುದ್ಧ ಸನ್ನದ್ಧರಾದ ಕೌರವರನ್ನು ನೋಡಿದನು. ತನ್ನ ಧನುಸ್ಸನ್ನು ಎತ್ತಿಹಿಡಿದು ಬಾಣಗಳನ್ನು ಬಿಡಲು ಸಿದ್ಧನಾಗಿ, ಶ್ರೀಕೃಷ್ಣನಿಗೆ ಈ ಮಾತುಗಳನ್ನು ಹೇಳಿದನು.

ಭಾವಾರ್ಥ:

ಯುದ್ಧವು ಇನ್ನೇನು ಪ್ರಾರಂಭವಾಗುವುದರಲ್ಲಿತ್ತು. ರಣಭೂಮಿಯಲ್ಲಿ ಶ್ರೀಕೃಷ್ಣನ ಮಾರ್ಗದರ್ಶನವನ್ನು ಅನುಸರಿಸಿದ ಪಾಂಡವರು ಅನಿರೀಕ್ಷಿತ ರೀತಿಯಲ್ಲಿ ತಮ್ಮ ಸೈನ್ಯದ ವ್ಯೂಹವನ್ನು ರಚಿಸಿದ್ದರಿಂದ ಕೌರವರು ಬಹುಮಟ್ಟಿಗೆ ಉತ್ಸಾಹವನ್ನು ಕಳೆದುಕೊಂಡರು. ಇದು ಮುಂಚೆ ಬಂದ ಮಾತುಗಳಿಂದ ತಿಳಿಯುವಂತಿದೆ. ಅರ್ಜುನನ ಧ್ವಜದಲ್ಲಿದ್ದ ಹನುಮಂತನ ಸಂಕೇತವು ಮತ್ತೊಂದು ಸೂಚನೆಯಾಗಿತ್ತು. ಏಕೆಂದರೆ ರಾಮರಾವಣರ ಯುದ್ಧದಲ್ಲಿ ಹನುಮಂತನು ರಾಮನ ಪಕ್ಷವನ್ನು ವಹಿಸಿದ್ದ. ಶ್ರೀರಾಮನು ವಿಜಯಿಯಾದನು. ಈಗ ಅರ್ಜುನನಿಗೆ ನೆರವಾಗಲು ರಾಮ, ಹನುಮಂತ ಇಬ್ಬರೂ ಆತನ ರಥದಲ್ಲಿದ್ದರು. ಶ್ರೀಕೃಷ್ಣನೇ ಶ್ರೀರಾಮ. ಶ್ರೀರಾಮನು ಎಲ್ಲಿದ್ದರೆ ಅಲ್ಲಿ ಅವನ ನಿರಂತರ ಸೇವಕ ಹನುಮಂತನೂ, ಆತನ ನಿರಂತರ ಧರ್ಮಪತ್ನಿ, ಭಾಗ್ಯಲಕ್ಷ್ಮಿಯಾದ ಸೀತೆಯೂ ಇರುತ್ತಾರೆ. ಆದುದರಿಂದ ಅರ್ಜುನನಿಗೆ ಶತ್ರುಭಯಕ್ಕೆ ಕಾರಣವೇ ಇರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಇಂದ್ರಿಯಗಳ ಸ್ವಾಮಿಯಾದ ಶ್ರೀಕೃಷ್ಣನೇ ಸ್ವತಃ ಅಲ್ಲಿದ್ದು ಅವನಿಗೆ ನಿರ್ದೇಶಿಸುತ್ತಿದ್ದ. ಹೀಗೆ ಅರ್ಜುನನಿಗೆ ಯುದ್ಧನಿರ್ವಹಣೆಯಲ್ಲಿ ಎಲ್ಲ ಸನ್ಮಾರ್ಗದರ್ಶನವೂ ಲಭ್ಯವಾಗಿತ್ತು. ಭಗವಂತ ತನ್ನ ನಿರಂತರ ಭಕ್ತನಿಗಾಗಿ ರೂಪಿಸಿದ್ದ ಇಂತಹ ಶುಭ ಸನ್ನಿವೇಶವೇ ನಿಶ್ಚಯವಾದ ವಿಜಯದ ಸೂಚನೆಯಾಗಿತ್ತು.



***************************************

atha vyavasthitan drstva
dhartharashtran kapi-dhvajah
parvatte shastra-sampate
dhanur udyamya pandavah
hrushikesham tada vaakyam
idam aha mahi-pate

***************************************

Translation:

O King, at that time Arjuna, the son of Pandu, who was seated in his chariot, his flag with Hanuman, took up his bow and prepared to shoot his arrows, looking at the sons of Dhrutarashtra. O King, Arjuna then spoke to Hrishikesha [Krishna] these words:

Purport:

The battle was just about to begin. It is from the above statement that the sons of Dhrutarashtra were more or less disheartened by the unexpected arrangement of military force by the Pandavas, who were guided by the direct instructions of Lord Krishna on the battlefield. The emblem of Hanuman on the flag of Arjuna is another sign of victory because Hanuman cooperated with Lord Rama in the battle between Rama and Ravana, and Lord Rama emerged victorious. Now both Rama and Hanuman were present on the chariot of Arjuna to help him. Lord Krishna is Rama Himself, and wherever Lord Rama is, His eternal servitor Hanuman and His eternal consort Seeta, the goddess of fortune, are present. Therefore, Arjuna had no cause to fear any enemies whatsoever. And above all, the Lord of senses, Lord Krishna, was personally present to give him direction. Thus, all good counsel was available to Arjuna in the matter of executing the battle. In such auspicious conditions, arranged by the Lord for his eternal devotee, lay the signs of assured victory.





Bhagavad Gita Daily Quotes


ಸ ಘೋಷೋ ಧಾರ್ತರಾಷ್ಟ್ರಾಣಾಂ ಹೃದಯಾನಿ ವ್ಯದಾರಯತ್ |
ನಭಶ್ಚ ಪೃಥಿವೀಂ ಚೈವ ತುಮುಲೋಭ್ಯನುನಾದಯನ್ ||೧೯||


ಅನುವಾದ:

ಈ ಶಂಖಗಖ ನಾದದಿಂದ ಗೊಂದಲವುಂಟಾಯಿತು. ಭೂಮಿ ಮತ್ತು ಆಕಾಶಗಳಲ್ಲಿ ಪ್ರತಿಧ್ವನಿಯನ್ನು ಮಾಡುತ್ತಾ ಅದು ಕೌರವರ ಹೃದಯಗಳನ್ನು ಚೂರುಚೂರು ಮಾಡಿತು.

ಭಾವಾರ್ಥ:

ದುರ್ಯೋಧನನ ಪಕ್ಷದಲ್ಲಿದ್ದ ಭೀಷ್ಮರೂ ಮತ್ತಿತರರೂ ತಮ್ಮ ಶಂಖಗಳನ್ನು ಊದಿದಾಗ ಪಾಂಡವರ ಹೃದಯಗಳು ಬಿರಿಯಲಿಲ್ಲ. ಅಂತಹ ಘಟನೆಗಳನ್ನ ಇಲ್ಲಿ ಪ್ರಸ್ತಾಪಿಸಿಲ್ಲ. ಆದರೆ ಇಲ್ಲಿ ಪಾಂಡವ ಪಕ್ಷದವರ ಸದ್ದುಗಳ ಪ್ರತಿಧ್ವನಿಯಿಂದ ಧೃತರಾಷ್ಟ್ರನ ಮಕ್ಕಳ ಹೃದಯಗಳು ನುಚ್ಚುನೂರಾದವು ಎಂದು ಹೇಳಿದೆ. ಇದಕ್ಕೆ ಕಾರಣ ಪಾಂಡವರು ಮತ್ತು ಕೃಷ್ಣನಲ್ಲಿ ಅವರಿಗಿದ್ದ ವಿಶ್ವಾಸ. ದೇವಾಧಿದೇವನಲ್ಲಿ ಆಶ್ರಯ ಪಡೆದವನು ಅತ್ಯಂತ ಘೋರ ಅನಾಹುತದ ನಡುವೆಯೂ ಹೆದರುವ ಅಗತ್ಯವೇ ಇಲ್ಲ.



***************************************

sa ghosho dhartharashtranam
hradayani vyadarayat
nabhash cha prithivim chiava
tumulo bhyanunaadayam

***************************************

Translation:

The blowing of these different conchshells became uprorious, and thus, vibrating both in the sky and on the earth, it shattered the hearts of the sons of Dhrutarashtra.

Purport:

When Bheeshma and the others on the side of Dhuryodhana blew their respective conchshells, there was no heart-breaking on the part of the Pandavas. Such occurrences are not mentioned, but in this particular verse it is mentioned that the hearts of the sons of Dhrutarashtra were shattered by the sounds vibrated by the Pandavas party. This is due to the Pandavas and their confidence in Lord Krishna. One who takes shelter of the Supreme Lord has nothing to fear, even in the midst of the greatest calamity.





Bhagavad Gita Daily Quotes


ಅನಂತವಿಜಯಂ ರಾಜಾ ಕುಂತಿಪುತ್ರೋ ಯುಧಿಷ್ಠಿರಃ |
ನಕುಲಃ ಸಹದೇವಶ್ಚ ಸುಘೋಷಮಣಿಪುಷ್ಪಕೌ ||೧೬||

ಕಾಶ್ಯಶ್ಚ ಪರಮೇಶ್ವಾಸಃ ಶಿಖಂಡೀಚ ಮಹಾರಥಃ |
ಧೃಷ್ಟದ್ಯುಮ್ನೋ ವಿರಾಟಶ್ಚ ಸಾತ್ಯಕಿಶ್ಚಾಪರಾಜಿತಃ ||೧೭||

ದ್ರುಪದೋ ದ್ರೌಪದೇಯಾಶ್ಚ ಸರ್ವಶಃ ಪೃಥಿವೀಪತೇ |
ಸೌಭದ್ರಶ್ಚ ಮಹಾಬಾಹುಃ ಶಂಖಾನ್ ದಧ್ಮುಃ ಪೃಥಕ್ ಪೃಥಕ್ ||೧೮||


ಅನುವಾದ:
ಕುಂತೀಪುತ್ರನಾದ ಯುಧಿಷ್ಠಿರನು ಅನಂತವಿಜಯವೆಂಬ ತನ್ನ ಶಂಖವನ್ನು ಊದಿದನು. ನಕುಲ ಸಹದೇವರು ಸುಘೋಷ ಮತ್ತು ಮಣಿಪುಷ್ಪಕ ಶಂಖಗಳನ್ನು ಊದಿದರು. ಅರಸನೇ, ಮಹಾಧನುರ್ಧಾರಿಯಾದ ಕಾಶೀರಾಜ, ಮಹಾರಥನಾದ ಶಿಖಂಡಿ, ಧೃಷ್ಟದ್ಯುಮ್, ವಿರಾಟ, ಅಜೇಯನಾದ ಸಾತ್ಯಕಿ, ದ್ರುಪದ, ದ್ರೌಪದಿಯ ಮಕ್ಕಳು, ಮಹಾಬಾಹುವೂ ಸುಭದ್ರೆಯ ಮಗನೂ ಆದ ಅಭಿಮನ್ಯು ಎಲ್ಲರೂ ತಮ್ಮ ಶಂಖಗಳನ್ನು ಊದಿದರು.

ಭಾವಾರ್ಥ:

ಅರಸ ಧೃತರಾಷ್ಟ್ರನು ಪಾಂಡುಪುತ್ರರಿಗೆ ಮೋಸಮಾಡಿ ತನ್ನ ಮಕ್ಕಳನ್ನೇ ಸಿಂಹಾಸನದ ಮೇಲೆ ಕೂಡಿಸಲು ಕೈಗೊಂಡ ಅವಿವೇಕದ ನೀತಿಯು ಮೆಚ್ಚುವಂತಹುದಲ್ಲ ಎಂದು ಸಂಜಯನು ಜಾಣ್ಮೆಯಿಂದ ಅವನಿಗೆ ತಿಳಿಸಿದ. ಆ ಮಹಾಸಮರದಲ್ಲಿ ಇಡೀ ಕುರುಕುಲ ನಿರ್ನಾಮವಾಗುತ್ತದೆ ಎಂದು ಆಗಲೇ ಸ್ಪಷ್ಟವಾದ ಸೂಚನೆಗಳಿದ್ದವು. ಪಿತಾಮಹ ಭೀಷ್ಮನಿಂದ ಪ್ರಾರಂಭಿಸಿ ಅಭಿಮನ್ಯು ಮತ್ತಿತರ ಮೊಮ್ಮಕ್ಕಳವರೆಗೆ ಎಲ್ಲರೂ ಮತ್ತು ಜಗತ್ತಿನ ಅನೇಕ ರಾಷ್ಟ್ರಗಳ ದೊರೆಗಳೂ ಅಲ್ಲಿದ್ದರು. ಎಲ್ಲರ ಸಾವು ಖಚಿತವಾಗಿತ್ತು. ಈ ಭೀಕರ ವಿಪತ್ತಿಗೆ ರಾಜ ಧೃತರಾಷ್ಟ್ರನೇ ಕಾರಣ. ಏಕೆಂದರೆ ಅವನು ತನ್ನ ಮಕ್ಕಳು ಅನುಸರಿಸಿದ ನೀತಿಗೆ ಬೆಂಬಲ ನೀಡಿದ.



***************************************

anantavijayam raja
kunti putro yidhishtirah
nakulah sahadevas cha
sughosha-manipushpakau
kaayash cha parameshvasah
shikhandi cha maha-rathah
dhrustadumno viraatas cha
saatyakis chaparajitah
drupado draupadeyas cha
sarvashah prathvi-pate
saubhadras cha maha-bahau
shankhan dadhmuh prathak prathak

***************************************

Translation:

Kind Yudhishtira, the son of Kunti, blew his conchshell, the Anantavijaya, and Nakula and Sahadeva blew the Sughosha and Manipushpaka. That great archer the King of Kashi, the great fighter Shikhandi, Dhrushtadymna, Virata and the unconquerable Saatyaki, Drupada, the sons of Draupadi and the others, O King, such as the son of Subhadra, greatly armed, all blew their respective conchshells.

Purport:

Sanjaya informed King Dhrutarastra very tactfully that his unwise policy of deceiving the sons of Pandu and endeavouring to enthrone his own sons on the seat of the kingdom was not very laudable. The signs already clearly indicated that the whole Kuru dyansty would be killed in that great battle. Beginning with the grandsire, Bheeshma, down to the grandsons like Abhimanyu and others - including kings from many states of the world - all were present there, and all were doomed. The whole catastrophe was due to King Dhrutarastra, because he encouraged the policy followed by his sons.




Bhagavad Gita Daily Quotes

***************************************

ಪಾಂಚಜನ್ಯಂ ಹೃಷಿಕೇಶೋ ದೇವದತ್ತಂ ಧನಂಜಯಃ |
ಪೌಂಡ್ರಂ ದಧ್ಮೌ ಮಹಾಶಂಖಂ ಭೀಮಕರ್ಮಾ ವೃಕೋದರಃ ||೧೫||

***************************************

ಅನುವಾದ:

ಹೃಷಿಕೇಶನು ತನ್ನ ಪಾಂಚಜನ್ಯವೆನ್ನ್ನುವ ಶಂಖವನ್ನೂ, ಅರ್ಜುನನು ಭಯಂಕರ ದೇವದತ್ತವನ್ನೂ, ವೃಕೋದರನೂ ಮತ್ತು ಅದ್ಭುತ ಸಾಹಸಗಳನ್ನು ಮಾಡಬಲ್ಲವನೂ ಆದ ಭೀಮನು ಪೌಂಡ್ರವೆನ್ನುವ ಮಹಾಶಂಖವನ್ನು ಊದಿದರು.

ಭಾವಾರ್ಥ:

ಈ ಶ್ಲೋಕದಲ್ಲಿ ಕೃಷ್ಣನನ್ನು ಹೃಷಿಕೇಶ ಎಂದು ಕರೆದಿದೆ. ಏಕೆಂದರೆ ಅವನು ಎಲ್ಲಾ ಇಂದ್ರಿಯಗಳ ಒಡೆಯ. ಜೀವಿಗಳೆಲ್ಲಾ ಅವನ ಅವಿಭಾಜ್ಯ ಅಂಶಗಳು. ನಿರಾಕಾರವಾದಿಗಳು ಜೀವಿಗಳಿಗೆ ಇಂದ್ರಿಯಗಳಿವೆ ಎನ್ನುವುದಕ್ಕೆ ವಿವರಣೆ ಕೊಡಲಾರರು. ಆದುದರಿಂದ ಅವರು ಎಲ್ಲಾ ಜೀವಿಗಳನ್ನು ಇಂದ್ರಿಯರಹಿತರು ಅಥವಾ ನಿರಾಕಾರ ಎಂದು ವರ್ಣಿಸಲು ಕಾತರರಾಗಿರುತ್ತಾರೆ. ಎಲ್ಲಾ ಜೀವಿಗಳ ಹೃದಯಗಳಲ್ಲಿ ನೆಲೆಸಿರುವ ಭಗವಂತನು ಅವರ ಇಂದ್ರಿಯಗಳನ್ನು ನಿರ್ದೇಶಿಸುತ್ತಾನೆ. ಆದರೆ ಆಯಾ ಜೀವಿಯು ಶರಣಾಗತನಾಗಿರುವ ರೀತಿಯಲ್ಲಿ ನಿರ್ದೇಶಿಸುತ್ತಾನೆ. ಭಕ್ತನು ಪರಿಶುದ್ಧನಾದರೆ ಭಗವಂತನು ಅವನ ಇಂದ್ರಿಯಗಳನ್ನು ನೇರವಾಗಿ ನಿಯಂತ್ರಿಸುತ್ತಾನೆ. ಕುರುಕ್ಷೇತ್ರ ರಣಭೂಮಿಯಲ್ಲಿ ಭಗವಂತನು ನೇರವಾಗಿ ಅರ್ಜುನನ ಅಲೌಕಿಕ ಇಂದ್ರಿಯಗಳನ್ನು ನಿಯಂತ್ರಿಸುತ್ತಾನೆ. ಇದರಿಂದಲೇ ಅವನನ್ನು ಹೃಷಿಕೇಶ ಎಂದು ಕರೆಯುವುದು. ಭಗವಂತನಿಗೆ ಅವನ ಬೇರೆಬೇರೆ ಕಾರ್ಯಗಳಿಗೆ ಅನುಗುಣವಾಗಿ ಬೇರೆಬೇರೆ ಹೆಸರುಗಳು ಇವೆ. ಉದಾಹರಣೆಗೆ, ಅವನು ಮಧು ಎಂಬ ರಾಕ್ಷಸನನ್ನು ಕೊಂದ. ಆದುದರಿಂದ ಆತನ ಹೆಸರು ಮಧುಸೂದನ. ಅವನು ಗೋವುಗಳಿಗೂ, ಇಂದ್ರಿಯಗಳಿಗೂ ಸಂತೋಷವನ್ನು ಉಂಟುಮಾಡುತ್ತಾನೆ. ಆದುದರಿಂದ ಗೋವಿಂದ, ವಸುದೇವನ ಮಗನಾಗಿ ಅವತರಿಸಲ್ಪಟ್ಟದ್ದರಿಂದ ವಾಸುದೇವ, ದೇವಕಿಯನ್ನು ತಾಯಿಯಾಗಿ ಸ್ವೀಕರಿಸಿದ. ಆದುದರಿಂದ ದೇವಕಿನಂದನ. ತನ್ನ ಬಾಲಲೀಲೆಗಳ ಸಂತೋಷವನ್ನು ವೃಂದಾವನದಲ್ಲಿ ಯಶೋದೆಗೆ ಅನುಗ್ರಹಿಸಿದ ಕಾರಣ ಯಶೋದಾನಂದನ, ತನ್ನ ಗೆಳೆಯ ಪಾರ್ಥನ ಸಾರಥಿಯಾದನೆಂದು ಪಾರ್ಥಸಾರಥಿ. ಕುರುಕ್ಷೇತ್ರದ ರಣರಂಗದಲ್ಲಿ ಅರ್ಜುನನಿಗೆ ಮಾರ್ಗದರ್ಶನ ಮಾಡಿದುದರಿಂದ ಹೃಷಿಕೇಶ.

ಈ ಶ್ಲೋಕದಲ್ಲಿ ಅರ್ಜುನನನ್ನು ಧನಂಜಯ ಎಂದು ಕರೆಯಲಾಗಿದೆ. ಏಕೆಂದರೆ ಅವನ ಅಣ್ಣನು ಕೈಗೊಂಡ ಹಲವು ಯಾಗಗಳಿಗೆ ಹಣವು ಅಗತ್ಯವಾದಾಗ ಅದನ್ನು ಪಡೆಯಲು ಅವನು ನೆರವಾದ. ಭೀಮನಿಗೆ ವೃಕೋದರನೆಂದು ಹೆಸರು. ಏಕೆಂದರೆ ರಾಕ್ಷಸ ಹಿಡಿಂಬನನ್ನು ಕೊಲ್ಲುವಂತಹ ಅಸಾಧಾರಣ ಸಾಹಸಗಳನ್ನು ಮಾಡಿದಂತೆಯೇ ಅವನು ಎಲ್ಲರನ್ನೂ ಮೀರಿಸಿ ಆಹಾರವನ್ನು ತಿನ್ನುತ್ತಿದ್ದ. ಭಗವಂತನಿಂದ ಪ್ರಾರಂಭಿಸಿ ಪಾಂಡವ ಸೈನ್ಯದ ನಾಯಕರು ಊದಿದ ಶಂಖಗಳ ನಾದವು ಯೋಧರಿಗೆ ಹುರುಪನ್ನುಂಟುಮಾಡಿತು. ಅವರ ಎದುರು ಪಕ್ಷದಲ್ಲಿ ಇಂತಹ ಪುಣ್ಯವಿರಲಿಲ್ಲ. ಪರಮ ನಿಮಾಯಕನಾದ ಶ್ರೀಕೃಷ್ಣನು ಅಲ್ಲಿರಲಿಲ್ಲ, ಭಾಗ್ಯಲಕ್ಷ್ಮಿಯೂ ಇರಲಿಲ್ಲ. ಆದುದರಿಂದ ಅವರ ಸೋಲು ಆಗಲೇ ನಿಶ್ಚಯವಾಗಿಹೋಗಿತ್ತು. ಶಂಖಗಳ ನಾದವು ಘೋಷಿಸಿದ್ದು ಈ ಸಂದೇಶವನ್ನೇ.



***************************************

paanchajanyam hrishikesho
devdattam dhananjayah
paundram dadhamau maha-shankham
bheema-karma vrkodarah

***************************************

Translation:

Then, Lord Krishna blew his conchshell, called Panchajanya; Arjuna blew his, the Devadatta; and Bheema, the voracious eater and pefromer of Herculean tasks, blew his terrific conchshell called Paundram.

Purport:

Lord Krishna is referred to as Hrishikesha in this verse because he is the owner of all senses. The living entities are part and parcel of Him, and therefore, the senses of the living entities are also part and parcel of His senses. The impersonalists cannot account for the senses of the living entities, and therefore they are always anxious to describe akk living entities as sense-less, or impersonal. The Lord, situated in the hearts of all living entities, directs their senses. But, He directs in terms of the surrender of the living entity, and in the case of pure devotee He directly controls the senses. Here on the Battlefield of Kurukshetra the Lord directly controls the transcedental senses of Arjuna, and thus His particular name of Hrishikesha, The Lord has different names according to His different activities. For example, His name is Madhusudhana because he killed the demon of the name Madhu; His name is Vaasudeva because He appeared as the son of Vasudeva; His name is Devaki-Nandana because He accepted Devaki as His mother; His name is Yashoda-Nandana because He awarded His childhood pastimes to Yashoda at Vrindavana; His name is Partha-Sarathi because He worked as charioteer of His friend Arjuna. Similarly, his name is Hrishikesha because He gave direction to Arjuna on the Battlefield of Kurukshetra.

Arjuna is referred to as Dhananjaya in this verse because he helped his elder brother in fetching wealth when it was required by the King to make expenditures for different sacrifices. Similarly, Bheema is known as Vrkodara because he could eat as voraciously as he could peform Herculean tasks, such as killing the demon Hidimba. So, the particular types of conchshells blown by the different personalities on the side of the Pandavas, beginning with the Lord's, were all very encouraging to the fighting soldiers. On the other side there were no such credits, nor the presence of the Lord Krishna, the supreme director, nor that of the goddess of fortune. So, they were predestined to lose the battle- and that was the message announced by the sounds of the conchshells.





Bhagavad Gita Daily Quotes


 

Blogger Templates by GeckoandFly modified and converted to Blogger Beta by Blogcrowds.